https://www.facebook.com/share/p/19ukkv3eQb/ *ಯುಟಿಕೆ ಬೆಂಬಲಿಸಿ ಬೆಳೆಸಿದ ನಾವೇ ಹತಾಶರಾಗಿದ್ದೇವೆ* ✍️ರಾಫಿ ನಗರ ಯುಟಿ ಖಾದರ್ ವಿರುದ್ಧ ಎಸ್ಡಿಪಿಐ ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಿದ್ದ ಕಾಲದಲ್ಲಿ ಅವರ ಪರವಾಗಿ ನಮ್ಮ ಕೈಗಳು ಸಾಕಷ್ಟು ಚಲಿಸಿದ್ದವು. ಸರಿ ತಪ್ಪುಗಳು ವಿಮರ್ಶೆಗಳಾಚೆ ನಮ್ಮ ಸಮುದಾಯದ ಪ್ರತಿನಿಧಿಯಾಗಿ ಕಂಡು ಕೊಂಡಾಡಿದ್ದೆವು. ಇಡೀ ಸಮಾಜದ ನಿಲುವುಗಳಾಚೆ ಅವರು ನಮ್ಮವರೆಂಬ ಕಲ್ಪನೆ ನಮ್ಮದಾಗಿತ್ತು. ಒಂದು ಕಡೆ ತಾಜುಲ್ ಉಲಮಾ ,ಸುಲ್ತಾನುಲ್ ಉಲಮಾ ಸಹಿತ ಎಲ್ಲಾ ಉಲಮಾಗಳ ಅನುಗ್ರಹವನ್ನೂ ಪಡೆದು ರಾಜಕೀಯದಲ್ಲಿ ಹಂತಹಂತವಾಗಿ ಮೇಲಕ್ಕೆ ಬೆಳೆದರು. ಯುಟಿ ಕೆ ರಾಜಕೀಯದಲ್ಲಿ ಸುಮಾರು 12ವರ್ಷಗಳ ಮೊದಲಿನ ವರೆಗೆ ,ಅಂದರೆ ತಾಜುಲ್ ಉಲಮಾ ವಫಾತ್ ತನಕ ಅವರೊಳಗಿನ ಸಮಾಜದ ,ಸಮುದಾಯ ಬದ್ಧತೆ ನಮಗೆ ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಕಾಣುತ್ತಿತ್ತು. ಒಬ್ಬ ಮುಸ್ಲಿಮನಾಗಿ ಇತರ ಧರ್ಮೀಯರ ಪೂಜೆಗಳಲ್ಲಿ , ಅಥವಾ ಆಚರಣೆಗಳಲ್ಲಿ ಭಾಗಿಯಾಗುವುದು ನಾವು ನಮ್ಮ ಧರ್ಮಕ್ಕೆ ಬಗೆಯುವ ದ್ರೋಹವಾಗಿಯೂ , ನಂಬಿಕೆ ಇಲ್ಲದೆ ಇತರ ಧರ್ಮೀಯರ ನಂಬಿಕೆಗೆ ಮಾಡುವ ಅಪಚಾರವೂ ಆಗಿದೆ. ಇಂತಹ ವಿಚಿತ್ರ ರಾಜಕೀಯ ಗಿಮಿಕ್‌ಗಳು ತಾಜುಲ್ ಉಲಮಾರ ವಫಾತ್ ತನಕ ನಾವು ಯುಟಿಕೆಯಲ್ಲಿ ಕಂಡಿರಲಿಲ್ಲ. ಆದರೆ ಅದ್ಯಾವ ಭಯ ಅವರಿಂದ ಹೊರಟು ಹೋಯ್ತೋ , ಅಥವಾ ತಂಙಳರ ಜೀವಿತ ಕಾಲದಲ್ಲಿದ್ದ ಭಯ ಅದು ಬೌದ್ಧಿಕವಾದ ಅವರ ಮೇಲಿನ ಭಯ ಮಾತ್ರ ಇದ್ದುದರಿಂದ ಅವರನ್ನು ಪ್ರಾಮ...