ಯುಟಿಕೆ
https://www.facebook.com/share/p/19ukkv3eQb/
*ಯುಟಿಕೆ ಬೆಂಬಲಿಸಿ ಬೆಳೆಸಿದ ನಾವೇ ಹತಾಶರಾಗಿದ್ದೇವೆ*
✍️ರಾಫಿ ನಗರ
ಯುಟಿ ಖಾದರ್ ವಿರುದ್ಧ ಎಸ್ಡಿಪಿಐ ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಿದ್ದ ಕಾಲದಲ್ಲಿ ಅವರ ಪರವಾಗಿ ನಮ್ಮ ಕೈಗಳು ಸಾಕಷ್ಟು ಚಲಿಸಿದ್ದವು. ಸರಿ ತಪ್ಪುಗಳು ವಿಮರ್ಶೆಗಳಾಚೆ ನಮ್ಮ ಸಮುದಾಯದ ಪ್ರತಿನಿಧಿಯಾಗಿ ಕಂಡು ಕೊಂಡಾಡಿದ್ದೆವು. ಇಡೀ ಸಮಾಜದ ನಿಲುವುಗಳಾಚೆ ಅವರು ನಮ್ಮವರೆಂಬ ಕಲ್ಪನೆ ನಮ್ಮದಾಗಿತ್ತು. ಒಂದು ಕಡೆ ತಾಜುಲ್ ಉಲಮಾ ,ಸುಲ್ತಾನುಲ್ ಉಲಮಾ ಸಹಿತ ಎಲ್ಲಾ ಉಲಮಾಗಳ ಅನುಗ್ರಹವನ್ನೂ ಪಡೆದು ರಾಜಕೀಯದಲ್ಲಿ ಹಂತಹಂತವಾಗಿ ಮೇಲಕ್ಕೆ ಬೆಳೆದರು. ಯುಟಿ ಕೆ ರಾಜಕೀಯದಲ್ಲಿ ಸುಮಾರು 12ವರ್ಷಗಳ ಮೊದಲಿನ ವರೆಗೆ ,ಅಂದರೆ ತಾಜುಲ್ ಉಲಮಾ ವಫಾತ್ ತನಕ ಅವರೊಳಗಿನ ಸಮಾಜದ ,ಸಮುದಾಯ ಬದ್ಧತೆ ನಮಗೆ ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಕಾಣುತ್ತಿತ್ತು.
ಒಬ್ಬ ಮುಸ್ಲಿಮನಾಗಿ ಇತರ ಧರ್ಮೀಯರ ಪೂಜೆಗಳಲ್ಲಿ , ಅಥವಾ ಆಚರಣೆಗಳಲ್ಲಿ ಭಾಗಿಯಾಗುವುದು ನಾವು ನಮ್ಮ ಧರ್ಮಕ್ಕೆ ಬಗೆಯುವ ದ್ರೋಹವಾಗಿಯೂ , ನಂಬಿಕೆ ಇಲ್ಲದೆ ಇತರ ಧರ್ಮೀಯರ ನಂಬಿಕೆಗೆ ಮಾಡುವ ಅಪಚಾರವೂ ಆಗಿದೆ. ಇಂತಹ ವಿಚಿತ್ರ ರಾಜಕೀಯ ಗಿಮಿಕ್‌ಗಳು ತಾಜುಲ್ ಉಲಮಾರ ವಫಾತ್ ತನಕ ನಾವು ಯುಟಿಕೆಯಲ್ಲಿ ಕಂಡಿರಲಿಲ್ಲ. ಆದರೆ ಅದ್ಯಾವ ಭಯ ಅವರಿಂದ ಹೊರಟು ಹೋಯ್ತೋ , ಅಥವಾ ತಂಙಳರ ಜೀವಿತ ಕಾಲದಲ್ಲಿದ್ದ ಭಯ ಅದು ಬೌದ್ಧಿಕವಾದ ಅವರ ಮೇಲಿನ ಭಯ ಮಾತ್ರ ಇದ್ದುದರಿಂದ ಅವರನ್ನು ಪ್ರಾಮಾಣಿಕವಾಗಿರಿಸಿತ್ತೋ ಅಲ್ಲಾಹನೇ ಬಲ್ಲ.
ಉದ್ಘಾಟನೆ ವೇದಿಕೆಯಲ್ಲಿ ಮೇಣದ ಬತ್ತಿ ಉರಿಸಿದ ಕಾರಣ ಉಲಮಾ ಗಳು ಆಕ್ರೋಶಿತಗೊಂಡ ಕಾಲವೊಂದಿತ್ತು. ಕಾರಣ ವಿಶ್ವಾಸ ನಂಬಿಕೆಯಲ್ಲಿ ಕಲ್ಮಶವಿರಬಾರದೆಂಬ ಅಚಂಚಲ ನಂಬಿಕೆ. ಆದರೆ ಕಾಲಕ್ರಮೇಣ ಉಲಮಾ ಗಳ ಭಯ ಅವರಿಂದ ದೂರ ಸರಿಯಿತೆಂದೇ ಹೇಳಬಹುದು. ಏನು ಮಾಡಿದರೂ ನಡೆಯುತ್ತದೆಂಬಲ್ಲಿಗೆ ತಲುಪಿದರು. ಆರ್ಥಿಕ ಬಲಾಢ್ಯತೆ ಇಡೀ ಕರಾವಳಿಯ ಸಾಮ್ರಾಜ್ಯವನ್ನು ಕೈಯಲ್ಲಿ ಹಿಡಿದುಕೊಳ್ಳುವಷ್ಟರ ಮಟ್ಟಿಗೆ ಅವರ ಸಾಮ್ರಾಜ್ಯ ವಿಸ್ತರಿಸುವಲ್ಲಿಯೂ ಅವರು ಯಶಸ್ವಿಯಾದರು.
ಅವರ ಸಾಮ್ರಾಜ್ಯ ವಿಸ್ತರಣೆಯಾಗಿ ಪ್ರಬಲರಾದಂತೆ ಸಮುದಾಯ ಮತ್ತೊಂದು ಕಡೆ ದುರ್ಬಲವಾಗುತ್ತಾ ಬರುವುದು ನಮಗೆ ಪ್ರತ್ಯಕ್ಷವಾಗಿ ಕಾಣತೊಡಗಿತು. ಹಣದಿಂದ , ರಾಜಕೀಯ ಶಕ್ತಿಯಿಂದ ಇಡೀ ಸಮುದಾಯವನ್ನು ನಿಯಂತ್ರಣಕ್ಕೆ ಪಡೆಯಬಹುದೆಂಬ ಕಲ್ಪನೆಗೆ ಅವರು ಅವರರಿಯದೆಯೇ ಇತ್ತೀಚೆಗಿನ 10ವರ್ಷಗಳಲ್ಲಿ ತಲುಪಿದರು.
ನಾನು ದೇಶದಲ್ಲಿ ಈಗ ಅಮಿತ್ ಷಾ ಬಳಿಕ 24ಗಂಟೆ ರಾಜಕೀಯ ಯೋಚಿಸುವ ಚಾಣಾಕ್ಷನಿದ್ದರೆ ಯುಟಿಕೆಯನ್ನು ಗುರುತಿಸುತ್ತೇನೆ. ಅದು ಗುಣಾತ್ಮಕ ಅಥವಾ ಖಣಾತ್ಮಕ ಥರ್ಡ್ ಕ್ಲಾಸ್ ಪಾಲಿಟಿಕ್ಸ್ ಆಗಿಯೂ ವಿವಿದ ಸಂದರ್ಭಗಳಲ್ಲಿ ಅವರು ಉಪಯೋಗಿಸುತ್ತಿರಬಹುದು. ಆದರೆ ಇಂತಹ ರಾಜಕೀಯದಲ್ಲಿ ಅವರು ಅವರದ್ದೇ ಆದ ಬಳಗವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆಂದೇ ಹೇಳಬಹುದು. ಆ ಬಳಗವನ್ನು ಸೈದ್ಧಾಂತಿಕ, ಧಾರ್ಮಿಕ , ಸಾಮಾಜಿಕ ಬದ್ಧತೆಯನ್ನೂ ಮೀರಿ ಅಂಧವಾಗಿ ಸರಿ-ತಪ್ಪುಗಳಾಚೆ ಬೆಂಬಲಿಸುವ ಮನಸ್ಥಿತಿಯ ಬೆಂಬಲಿಗರನ್ನು ಪಡೆದರು. ಯಾರು ಯೋಚಿಸುತ್ತಾರೋ ,ಪ್ರತಿಕ್ರಿಯಿಸುತ್ತಾರೋ ಅವರನ್ನೆಲ್ಲಾ ವಿವಿದ ತಂತ್ರಗಾರಿಕೆಗಳ ಮೂಲಕ ಆರ್ಥಿಕ ಸಹಾಯ , ಉದ್ಯೋಗ ,ಉದ್ಯಮ, ಬೇನಾಮಿ ಗಳ ಮೂಲಕ ತನ್ನ ಕತ್ತಲ ಸಾಮ್ರಾಜ್ಯದೊಳಕ್ಕೆ ಎಳೆದು ಮೌನವಾಗಿಸಿ ಅಂಧ ಭಕ್ತರನ್ನಾಗಿ ಮಾಡಿಬಿಟ್ಟರು.
ಅದೇ ಸಂದರ್ಭ , ದುರ್ಬಲ ಜನಸಾಮಾನ್ಯರು ಯುಟಿ ಕೆ ಬೆಳವಣಿಗೆಯಲ್ಲಿ ಹತಾಶರಾಗುತ್ತಾ ಹೋದರು. ವಿವಿಧ ಸಂಘ ಸಂಸ್ಥೆಗಳ ನಾಯಕರು , ಸಮಾಜದ ಪ್ರಬಲ ಮನುಷ್ಯರು ಯುಟಿಕೆಯಿಂದ ಸಾಕಷ್ಟು ಅನುಕೂಲ ಪಡೆದುಕೊಂಡರು. ಪ್ರಭಾವ ಇಲ್ಲದ ದುರ್ಬಲರು ತಮ್ಮ ಮನೆಗಳಲ್ಲಿ ಮರಣ, ಮದುವೆ, ತಾಳ , ಹುಟ್ಟುಹಬ್ಬ , ಮುಂಜಿ ಕಾರ್ಯಕ್ರಮಗಳ ಹಾಜರಾತಿ ಕಂಡು ಸಂತೋಷ ಭರಿತರಾದರು. ಸಾಮಾನ್ಯರಿಗೆ ಕಂಡಕಂಡಲ್ಲಿ ಕೈ ನೀಡಲು ಸಿಕ್ಕಾಗ ಪರಮಾನಂದವಾಯ್ತು.
ಸಾರ್ವಜನಿಕವಾಗಿ ಕಂಡಾಗ ಎಲ್ಲರೊಂದಿಗೂ ಪರಿಹಾರದ ಭರವಸೆ , ಕಛೇರಿಗೆ ಆಹ್ವಾನ ಅವರ ರೀತಿ. ಇಂತದ್ದೇ ಆಹ್ವಾನ ಪಡೆದುಕೊಂಡ ಕುಕ್ಕಾಜೆ ಭಾಗದ ಪರಿಚಯದ ಹುಡುಗನೊಬ್ಬ ಹಗಲಿರುಳು ಬೆಂಗಳೂರಿನ ಇವರ ಕಛೇರಿಗೆ ಹೋಗಿ ಕುಳಿತುಕೊಂಡ. ಯಾವುದೇ ಪ್ರಭಾವಿಗಳು ಆತನ ಹಿಂದೆ ಇಲ್ಲದ ಕಾರಣ , ಕೊನೆಗೆ ನಿನಗೆ ಕೆಲಸವೇಕೆ? ಹಣ ಮಾಡಿ ಏನು ಮಾಡುವುದು ಎಂಬ ಅಪಹಾಸ್ಯದ ನಗುವಿನೊಂದಿಗೆ ಕಳುಹಿಸಿ ಬಿಟ್ಟ. ಆದರೆ ಈತನನ್ನು ನಂಬಿ ಇಂತಹ ವ್ಯಂಗ್ಯ ಉತ್ತರ ಪಡೆಯುವಾಗ ವರ್ಷವೇ ಕಳೆದಿತ್ತು. ಪಾಪದ ಹುಡುಗ ಕಛೇರಿಗೆ ಅಲೆದಾಡಿದ್ದೇ ಬಂತು. ಮಾನಸಿಕವಾಗಿ ನೊಂದ ಆ ಹುಡುಗ ಕೊನೆಗೆ ಹೇಳಿದ್ದು , ನನಗೆ ಕೆಲಸ ಬೇಡ , ಆದರೆ ಕೊಡುವೆನೆಂದು ಭರವಸೆ ನೀಡಿ ನನ್ನ ಸಮಯ ವ್ಯರ್ಥ ಮಾಡಿದ್ದು ಸಹಿಸಲು ಆಗುತ್ತಿಲ್ಲವೆಂದು. ಇದು ಬಹುಪಾಲು ಯುಟಿಕೆಯ ನಂಬಿದ ದುರ್ಬಲರ ಪರಿಸ್ಥಿತಿ.
ಮತ್ತೊಂದು ಕಡೆ ಮಂಗಳೂರಿನ ಸಹಿತ ಇರುವ ಉದ್ಯಮಿಗಳು, ಕಾರ್ಪೋರೇಟ್‌ಗಳು ಯುಟಿ ಕೆ ಕೈಯಲ್ಲಿ ಭದ್ರರಾದರು. ವಿಶೇಷವೆಂದರೆ ಕೋಮು ಸೂಕ್ಷ್ಮತೆ ಇರುವ ಕರಾವಳಿಯಲ್ಲಿ ಬಿಜೆಪಿಯವರು , ಸಂಘ ಪರಿವಾರವು ಅವರ ಆಪ್ತ ವಲಯದಲ್ಲಿ ಸೇರಿಬಿಟ್ಟರು. ಅವೆಲ್ಲವೂ ಉದ್ಯಮ ,ಒಪ್ಪಂದ , ಹೊಂದಾಣಿಕೆ ತರಹ ಜನರ ಕಣ್ಣುಗಳಲ್ಲಿ ಕಾಣತೊಡಗಿತು. ದಂಧೆಗಳು ವ್ಯಾಪಕವಾಗಿ ಕರಾವಳಿ ಅಭಿವೃದ್ಧಿ ಮರೀಚಿಕೆ ಕಡೆ ತಲುಪಿತು.
ಇತ್ತೀಚೆಗೆ ಯಾರೋ ನನ್ನಲ್ಲಿ ಕೇಳಿದ್ದರು, ನಮ್ಮ ಶಾಸಕರು ಮಾತ್ರವೇ ನಿಮಗೆ ಪ್ರಶ್ನಿಸಲು ಕಾಣುವುದೆಂದು. ಆಗ "ಯುಟಿ ಕೆ ಕರಾವಳಿಯ ಮಟ್ಟಿಗೆ ಸರ್ವಾಧಿಕಾರಿಯಾಗಿ ಬೆಳೆದು ನಿಂತು ವರ್ಷಗಳು ದಾಟಿದೆ. " ಇಡೀ ಕರಾವಳಿಯ ರಾಜಕೀಯ ಕೈಯಲ್ಲಿಟ್ಟು , ತನ್ನದೇ ಸಾಮ್ರಾಜ್ಯವನ್ನು ನೇರವಾಗಿ ನಿಯಂತ್ರಿಸುತ್ತಿದ್ದಾರೆ. ಇದೇ ಪ್ರತಿಯೊಬ್ಬ ಕರಾವಳಿಗನ ಅಳಲು" ಎಂದುತ್ತರಿಸಿದೆ.
ಕರಾವಳಿಯ ಮುಸ್ಲಿಮರಿಗೆ ಒಂದು ರೀತಿಯ ಹತಾಶೆಯ ಭಾವನೆಯಿದೆ. ಒಂದು ಕಾಲದಲ್ಲಿ ಇಂತಹ ಹತಾಶೆಗಳು ಕಾಣುವಾಗ ರಮಾನಾಥ ರೈ , ಸೊರಕೆ, ಮೊಯ್ಲಿ ಈ ರೀತಿ ಆಕ್ರೋಶಗಳು ಹೊರಬರುತ್ತಿದ್ದವು. ಯುಟಿ ಕೆ ನಮ್ಮವನೆಂಬ ಸಣ್ಣ ಆಶಾಭಾವನೆ. ಆದರೆ ಈಗ ಅವರೆಲ್ಲರೂ ಮಾಯವಾಗಿ ನಮ್ಮವನೇ ಆದ ಯುಟಿ ಕೆ ನಿಯಂತ್ರಣಕ್ಕೆ ಜಿಲ್ಲೆ ಬಂದಾಗ ಹಿಂದೆಂದೂ ಕಂಡರಿಯದ ರೀತಿಯ ಹತಾಶೆಗೆ ನಾವು ತಲುಪಿದ್ದೇವೆ.
ಇತ್ತೀಚೆಗೆ ಕುಡುಪು ವಿನ ಅಶ್ರಫ್ ಹತ್ಯೆಯಲ್ಲಿ ಪೋಲೀಸರು ಪ್ರಕರಣವನ್ನು ಮುಚ್ಚಲು ,ದಾರಿತಪ್ಪಿಸಲು ಮಾಡಿದ ಕುತಂತ್ರಗಳ ಬಗ್ಗೆ ಅಲ್ಪಸಂಖ್ಯಾತ ಘಟಕದ ಶಾಹುಲ್ ಹಮೀದ್ ಬಹಿರಂಗವಾಗಿ ಹೇಳಿದರು, ಆಗಿನ ಕಮಿಷನರ್ ಬಗ್ಗೆ ಸಮಾಜದಲ್ಲಿ ವರ್ಷಗಳಿಂದೀಚೆಗೆ ಗೊಂದಲವಿದೆ. ಆಕ್ರೋಶವಿದೆ. ಅವರನ್ನು ಬದಲಾಯಿಸಲು ಹೋರಾಟವೂ ನಡೆದಿತ್ತು. ಅಂದು ಈ ಯುಟಿ ಕೆ ತನ್ನ ಅಧಿಕಾರದ ಮೂಲಕ ಪೋಲೀಸ್ ಇಲಾಖೆಗೊಂದು ಮೇಜರ್ ಸರ್ಜರಿ ನೀಡಿದ್ದರೆ ಕರಾವಳಿಯ ಇಂದಿನ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಪೋಲೀಸ್ ಇಲಾಖೆ ಬಲಿಷ್ಠವಾದರೆ ಆಗುವ ಪರಿಣಾಮ ಈಗಿನ ನೂತನ ಎಸ್ಪಿ ಹಾಗೂ ಪೋಲೀಸ್ ಕಮೀಷನರ್ ಮೂಲಕ ನಾವು ನೋಡುತ್ತಿದ್ದೇವೆ.
ಯುಟಿ ಕೆ ಇನ್ನು ಅಬ್ದುರ್ರಹ್ಮಾನ್ ಹತ್ಯೆಗೆ ಸರ್ಕಾರದ ಭಾಗದಿಂದ ಪರಿಹಾರ ಘೋಷಣೆ ನಡೆಸಿಲ್ಲ, ಉಲಮಾ ಗಳ ಪ್ರಯತ್ನದಿಂದ ಅಲ್ಪಸಂಖ್ಯಾತ ಸಚಿವರು ನೀಡಿದ ವೈಯಕ್ತಿಕ ಸಹಕಾರ ಮಾತ್ರ ಆ ಕುಟುಂಬಕ್ಕೆ ಹಸ್ತಾಂತರ ನಡೆದಿದೆ. ಅದೇ ರೀತಿ ವಿವಿಧ ಸಂಘ ಸಂಸ್ಥೆಗಳು ಸಹಾಯ ನೀಡಿದೆ. ಆ ಸಹಾಯಗಳು ಮಾತ್ರ ಕರಾವಳಿಯ ಸಮಸ್ಯೆಗೆ ಪರಿಹಾರವಾಗುದಿಲ್ಲ ಎಂಬುದು ಕಟು ಸತ್ಯ. ಪ್ರಕರಣವನ್ನು ಎಸ್ ಐ ಟಿ ಗೆ ವಹಿಸಿ ಕಠಿಣ ಕಾನೂನುಗಳು ಯಾಕೆ ಅಳವಡಿಕೆ ಮಾಡಬಾರದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕುಡುಪು ಅಶ್ರಫ್ ಹತ್ಯೆಯ ಆರೋಪಿಗಳಿಗೆ ಜಾಮೀನು ಹೇಗೆ ಸಿಗುತ್ತಿದೆ, ಕೋಮುಧ್ವೇಷ ಭಾಷಣಕಾರರು ಯಾವುದೇ ಸಮಸ್ಯೆಯಿಲ್ಲದೆ ಹೇಗೆ ಹೊರಗಡೆ ಇದ್ದಾರೆ ಎಂಬ ಪ್ರಶ್ನೆಗಳಿಗೂ ಕರಾವಳಿಯಲ್ಲಿ ಉತ್ತರ ಸಿಕ್ಕಿಲ್ಲ.
ಈ ನಡುವೆ ಎಸ್ ಎಸ್ ಎಫ್ ವೇದಿಕೆಯಲ್ಲಿ ಭಾಷಣ ಮಾಡಿ ವ್ಯವಸ್ಥಿತವಾಗಿ ಸಮಾಜದ ನಡುವೆ ಕರಾವಳಿಯ ಇತ್ತೀಚೆಗಿನ ಘಟನೆಗಳ ವಿಷಯಾಂತರ ನಡೆದಿದೆ. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ರಾಜಕಾರಣಿ ಸಂಘಟನೆಯ ವಿರುದ್ದ ಮಾತನಾಡಿದರೆ ಯಾವ ಸಮಸ್ಯೆಗೂ ಸಂಘಟನೆಗೆ ಆಗುವುದಿಲ್ಲವೆಂದು. ಅಂದರೆ ಮಾತನಾಡಿದ ವ್ಯಕ್ತಿಗೇ ಸಮಸ್ಯೆಯೆಂಬುದು ಸ್ಪಷ್ಟ. ಇದೀಗ ಕರಾವಳಿಯಲ್ಲಿ ಸಮಸ್ಯೆ ಇರುವುದು ಇಲ್ಲಿನ ಜ್ವಲಂತ ಸಮಸ್ಯೆಗಳೇ ಹೊರತು ಎಸ್ ಎಸ್ ಎಫ್ ವೇದಿಕೆಯ ಭಾಷಣವಲ್ಲ. ಎಸ್ ಎಸ್ ಎಫ್ ವೇದಿಕೆಯ ಭಾಷಣಕ್ಕೆ ಎಸ್ ಎಸ್ ಎಫ್ ರಾಜ್ಯ ಸಮಿತಿಯೇ ಮುಟ್ಟಿ ನೋಡುವ ಉತ್ತರ ಕೊಟ್ಟಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಯುಟಿ ಕೆ ಯಾರನ್ನೂ ಬೆಳೆಯಲು ಬಿಡುವುದಿಲ್ಲ, ಪ್ರಶ್ನಿಸಿದವರ ಮೇಲೆ ಹಗೆತನ ಸಾಧನೆ, ಏನೋ ಒಟ್ಟಾರೆಯಾಗಿ ಯುಟಿ ಕೆ ಹಳೆಯ ಕಾಲದ ಯುಟಿಕೆಯಂತು ಅಲ್ಲವೇ ಅಲ್ಲ ಭಾವನೆ ಸಾರ್ವತ್ರಿಕವಾಗಿದೆ.
ಇದು ಬರೆಯುವಾಗ ಕೆಲವರಾದರೂ ಯೋಚಿಸಬಹುದು, ಎಸ್ ಎಸ್ ಎಫ್ ವಿರುದ್ದ ಮಾತನಾಡಿದ ಕಾರಣ ಈ ನೋವೆಂದು. ಒಂದು ನೆನಪಿಟ್ಟುಕೊಳ್ಳಿ ಪ್ರಾಮಾಣಿಕವಾಗಿ ತಳಮಟ್ಟದ ಮುಸ್ಲಿಂ ಸಮುದಾಯದ ಜನರ ಬಳಿ ಅಭಿಪ್ರಾಯ ಪಡೆದು ನೋಡಿ. ಕಳೆದೊಂದು ವರ್ಷಗಳಿಂದ ಕರಾವಳಿಯ ಯಾವುದೇ ಸಂಘಟನೆ ಯಲ್ಲಿರುವ ಮುಸ್ಲಿಮರಿಗೂ ಯುಟಿಕೆ ಬೇಡ. ಏನೋ ಜನಮನಸ್ಸುಗಳಿಂದ ಅವರು ದೂರವಾಗಿ ಬಿಟ್ಟಿದ್ದಾರೆ. ಇನ್ನು ವಿವಿಧ ಸಂಘಟನೆಗಳ ನಾಯಕರು ಯುಟಿ ಕೆ ಜೊತೆ ಒಡನಾಟ ಇದ್ದರೆ, ಅವ್ಯಾವುವೂ ಆತನ ಮೇಲಿನ ನಂಬಿಕೆಯಿಂದಲ್ಲ. ಆತನಲ್ಲಿರುವ ಅಧಿಕಾರ , ಆತನ ಜೊತೆಗಿರುವವರ ಬಳಿಯ ಸಂಪತ್ತು , ಪ್ರಭಾವ ಇವೆಲ್ಲವು ಆ ನಂಟಿಗೆ ಕಾರಣ.
ಇನ್ನು ಈ ಎಲ್ಲಾ ಗೊಂದಲಗಳ ನಡುವೆ ಸುನ್ನೀ ಸಂಘ ಸಂಸ್ಥೆಗಳ ನಾಯಕರು ಯುಟಿ ಕೆಯನ್ನು ಭೇಟಿ ಮಾಡಿದರೂ ಫೋಟೋ ತೆಗೆಯಲು ಯಾಕೆ ಹಿಂಜರಿಯುತ್ತಿದ್ದಾರೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಯುಟಿ ಕೆ ರಾಜಕೀಯ ಜೀವನದಲ್ಲಿ ಇಂತಹ ಸಂದರ್ಭ ಈ ಮೊದಲು ಯಾವತ್ತಾದರೂ ನಡೆದಿದೆಯೇ ಎಂಬುದನ್ನು ಅವರಾಗಿಯೇ ಪರಾಮರ್ಷಿಸಬೇಕು. ರಾಜ್ಯದ ಘನವೆತ್ತ ಸ್ಪೀಕರ್ ಸ್ಥಾನದಲ್ಲಿದ್ದೂ , ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಿದ ಕಾರ್ಯಕರ್ತರು ಯಾರು ಯುಟಿಕೆಗೆ ಬೆಂಬಲವಾಗಿ ಒಂದು ಬರಹ ಬರೆದು ಹಂಚಿಕೊಳ್ಳಲು ಹೆದರುತ್ತಾರೆ. ನಾಯಕರು ಬಹಿರಂಗವಾಗಿ ಬೆಂಬಲಿಸುತ್ತಿಲ್ಲ. ಅವರನ್ನು ಬೆಂಬಲಿಸಿದ ಒಂದು ಪೋಸ್ಟರ್ , ಬರಹ ಅವರ ಜೊತೆಗಿನ ಹಿಂಬಾಲಕರು ಹಂಚಿಕೊಳ್ಳುತ್ತಾರೆ ಹೊರತು ,ಯಾವುದೇ ಸಮುದಾಯದ ವ್ಯಕ್ತಿ ಹಂಚಿಕೊಳ್ಳಲು ತಯಾರಾಗುತ್ತಿಲ್ಲ. ಇನ್ನು ಯಾವುದಾದರೂ ನಾಯಕರು ಯುಟಿ ಕೆ ಬೆಂಬಲಿಸಿ ಹೇಳಿಕೆ , ಹೊಗಳಿಕೆ ನಡೆಸಿದರೂ ಆ ನಾಯಕರನ್ನೇ ಸ್ವಂತ ಅನುಯಾಯಿಗಳು ವಿಮರ್ಷಿಸುತ್ತಿದ್ದಾರೆ . ಹೊರತು ಪ್ರೋತ್ಸಾಹಿಸುವ ಒಂದತ್ತು ಸಾಮಾಜಿಕ ತಾಣದ ಸಂದೇಶಗಳು ,ಸಮರ್ಥಿಸುವ ಮೆಸೇಜ್ ಗಳು ಕಾಣಲು ಸಾಧ್ಯವಾಗುತ್ತಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ನಾಳೆ ಏನಾದರೂ ಚುನಾವಣೆ ನಡೆದು ಯುಟಿ ಕೆ ಸೋತರೆ, ಅವರ ಮನೆಯಂಗಳದಲ್ಲಿ ಅಭಿಮಾನಿಗಳಾಗಿ ಹತ್ತು ಜನರೂ ಬಾಕಿಯಿರುವುದಿಲ್ಲವೆಂಬ ಸತ್ಯ ಬರೆದಿಟ್ಟುಕೊಳ್ಳಿ. ಅವರ ಜೊತೆಗೆ ಈಗ ಇರುವ ಎಲ್ಲರೂ ಅವರಲ್ಲಿರುವ ಅಧಿಕಾರದ ಕಾರಣಕ್ಕಾಗಿ ಮಾತ್ರ ಇರುವವರು.
ಯುಟಿ ಕೆ ಸರ್ , ದಯಮಾಡಿ ನಾಯಕರನ್ನು ,ಪ್ರಬಲರನ್ನು ಜೊತೆಗಿಟ್ಟುಕೊಂಡು ಅವರಿಗೆ ವೈಯಕ್ತಿಕವಾಗಿ, ಸಂಸ್ಥೆಗಳಿಗೆ ಸಹಾಯ ಸಹಕಾರ ಒದಗಿಸಿ ಸಾಮ್ರಾಜ್ಯವನ್ನು ಆಳುವೆನೆಂಬ ಭ್ರಮೆಯಿಂದ ಹೊರಬನ್ನಿ. ನಿಮ್ಮ ಜೊತೆ ನಿಲ್ಲುವ ನಾಯಕರಿಗೆ ಕ್ಷಣ ಮಾತ್ರದಲ್ಲಿ ಅನುಯಾಯಿಗಳೇ ಇಲ್ಲದ ಪರಿಸ್ಥಿತಿ ಕರಾವಳಿಯಲ್ಲಿದೆ. ಈ ಸತ್ಯವನ್ನು ಒಮ್ಮೆ ಕಣ್ಣಾಯಿಸಿ ನೋಡಿ.
ಇಂತಹ ರಾಜಕಾರಣಿಯ ಬದುಕು ಇತಿಹಾಸದಲ್ಲಿ ಕರಾಳ ಪುಟವಾಗಿ ಗುರುತಿಸುವುದು ಶತಸಿದ್ಧ. ಇನ್ನಾದರೂ ಯುಟಿ ಕೆ ತನ್ನ ಜೊತೆಗಿನ ಬಳಗವನ್ನು ಬದಲಾಯಿಸಬೇಕು ಜೊತೆಗೆ ಮನಸ್ಥಿತಿ ಯನ್ನು. ಇದು ಬದಲಾಗದಿದ್ದರೆ ಯುಟಿಕೆಯ ಅಧಿಕಾರ ಕರಾವಳಿಯ ರಾಜಕೀಯದಲ್ಲಿ ಒಂದು ದೊಡ್ಡ ಶೂನ್ಯವಾಗಿ ದಾಖಲಾಗಲಿದೆ. ಇತಿಹಾಸ ,ಸಮುದಾಯ ಸಮಾಜ ಕ್ಷಮಿಸದು. ಎಲ್ಲಾದರೂ ಸೋತರೆ ಸ್ವಂತ ಅಭಿಮಾನಿಗಳೇ ಸಂತ್ಯೆಸಲು ಸಿಗದ ಪರಿಸ್ಥಿತಿ ಕಾಣಬಹುದು.
Comments
Post a Comment