Posts

Showing posts from September, 2020

ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ

Image
ಯು ಕೆ ಇಬ್ರಾಹಿಂ ಹಾಜಿ ಉಳ್ಳಾಲ ✍️ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ. ಉಳ್ಳಾಲದ ಯು ಕೆ ಇಬ್ರಾಹಿಂ ಹಾಜಿಯವರನ್ನು ತಿಳಿಯದವರು ವಿರಳ. ಸುದೀರ್ಘ 35 ವರ್ಷಗಳ ಕಾಲ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1929 ರಲ್ಲಿ ಶೇಕಾಕ ಮತ್ತು ಪುತ್ತುಮ್ಮ (ನಫೀಸ) ದಂಪತಿಗಳ ಸುಪುತ್ರನಾಗಿ ಉಳ್ಳಾಲದ ಕೋಟೆಪುರದಲ್ಲಿ ಜನಿಸಿದರು. ತೀರಾ ಬಡ ಕುಟುಂಬವಾಗಿತ್ತು ಅವರದು. ಗೋಣಿ ಚೀಲ ವ್ಯವಹಾರದ ಮೂಲಕ ತಮ್ಮ ವ್ರತ್ತಿ ಜೀವನವನ್ನು ಆರಂಭಿಸಿದ ಯುಕೆ ಇಬ್ರಾಹಿಂ ಹಾಜಿಯವರು ಬಡವರ ಶಿಕ್ಷಣದ ಉನ್ನತಿಗಾಗಿ ಒತ್ತುಕೊಟ್ಟರು. ಉಳ್ಳಾಲದ ಬಡ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಇತರ ಪ್ರದೇಶದ ವಿದ್ಯಾವಂತರೆದುರು ತಮ್ಮೂರಿನ ಜನರು ಕೀಳಾಗಬಾರದು ಎಂಬ ದೂರದ್ರಷ್ಟಿ ಅವರಲ್ಲಿತ್ತು. ವಿಶಾಲ ಮನಸ್ಸಿನ ವ್ಯಕ್ತಿತ್ವದ ಒಡೆಯರಾಗಿದ್ದರು. ಅವರ ಮಾತಿನಲ್ಲಿ ತಂತ್ರಗಾರಿಕೆ, ನಡವಳಿಕೆಯಲ್ಲಿ ಗಾಂಭೀರ್ಯತೆ ಇತ್ತು. ಅವರು ಎಲ್ಲಾ ಜಾತಿ, ಧರ್ಮಗಳ ಜನತೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರ ಸ್ನೇಹ ತುಂಬಿದ ಸ್ವಭಾವದಿಂದಲೇ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದರು ಮತ್ತು ಗೌರವಿಸುತ್ತಿದ್ದರು.  ಸಾಮುದಾಯಿಕ ಮತ್ತು ಸಾಮಾಜಿಕ ಸೇವೆಯ ಮೂಲಕ ಜನಮನ್ನಣೆ ಪಡೆದ ಪ್ರಾರಂಭ ಹಂತದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದರು. ಬಳಿಕ ಸಯ್ಯಿದ್ ಮದನಿ ಉಳ್ಳಾಲ ಜಮಾತಿನ ಸಮಿತಿ ಸದಸ್ಯರಾದರು. 1973 ರಲ್ಲಿ ಸಯ್ಯಿದ್ ಮದನಿ ಉಳ್ಳಾಲ ದರ್ಗಾ ಇದರ ಅ...

ಟಿ ಎಚ್ ಇಬ್ರಾಹಿಂ ಮದನಿ

Image
ಟಿ ಎಚ್ ಇಬ್ರಾಹಿಂ ಮದನಿ ಸಂಗ್ರಹ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ. ಬ್ಯಾರಿ ಭಾಷೆಯಲ್ಲಿ ನಿರರ್ಗಳವಾಗಿ ಇಸ್ಲಾಮಿನ ಸುಂದರ ಆಶಯಾದರ್ಶಗಳ ಕುರಿತು ಮಾತನಾಡಬಲ್ಲ ಸಾಮರ್ಥ್ಯ ಹೊಂದಿದವರಾಗಿದ್ದರು ಟಿ ಎಚ್ ಇಬ್ರಾಹಿಂ ಮದನಿ. ಒಂದು ಕಾಲದಲ್ಲಿ ಬಹು ಬೇಡಿಕೆಯ ವಾಗ್ಮಿಯೂ, ದ.ಕ ಹಾಗು ಉಡುಪಿ ಭಾಗದ ಜನರ ಮನೆ ಮಾತಾಗಿದ್ದರು.  ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಹೆಗಡೆ ಹಿತ್ತಿಲು ನಿವಾಸಿಗಳಾದ ಅಬೂಬಕರ್ ಹಾಗು ಹವ್ವಮ್ಮ ದಂಪತಿಗಳ ಸುಪುತ್ರನಾಗಿ 1949 ರ ಮೇ - 10 ರಂದು ಜನಿಸಿದರು.  9 ನೇ ತರಗತಿಯವರೆಗೆ ಲೌಕಿಕ ಶಿಕ್ಷಣ ಪಡೆದಿದ್ದರು. ಧಾರ್ಮಿಕವಾಗಿ ಪ್ರತಿಷ್ಠಿತ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜನೆಗೈದು 1977 ರಲ್ಲಿ ಮದನಿ ಬಿರುದು ಪಡೆದರು. ತಾಜುಲ್ ಉಲಮಾ ಖ.ಸಿ ರವರ ನಿರ್ದೇಶನದಂತೆ, ಅವರ ಆಶೀರ್ವಾದ ಪಡೆದು ಕುಂಬೋಲ್ ನಲ್ಲಿ ಎರಡು ವರ್ಷ, ಉಜಿರೆಯಲ್ಲಿ 9 ವರ್ಷ, ಸುಳ್ಯದಲ್ಲಿ 9 ವರ್ಷ, ಉಚ್ಚಿಲ ಅರಿಕ್ಕಾಡಿಯಲ್ಲಿ 2 ವರ್ಷ ಹಾಗು ಮಂಜನಾಡಿಯಲ್ಲಿ 9 ವರ್ಷ ಮುದರ್ರಿಸ್ ಹಾಗು ಖತೀಬರಾಗಿ ಸೇವೆ ಸಲ್ಲಿಸಿದರು.  ಪತ್ನಿಯ ಹೆಸರು ಬೀಫಾತಿಮ, ಅತಾವುಲ್ಲ, ಯಹ್ಯಾ, ಬಾಸಿತ್ ಸಖಾಫಿ, ತ್ವಾಹಿರ್, ಜಲೀಲ್, ಜುನೈದ್ ಎಂಬ ಆರು ಗಂಡು ಮಕ್ಕಳು ಹಾಗು ಹಬೀಬಃ, ನಸೀಬಃ, ಹನ್ನತ್ ಆಯಿಶಾ ಎಂಬ ನಾಲ್ಕು ಹೆಣ್ಣು ಮಕ್ಕಳು. ಕರ್ನಾಟಕ ಕರಾವಳಿ ಭಾಗದ ಅತ್ಯುತ್ತಮ ಭಾಷಣಗಾರರಾಗಿದ್ದರು. ಬ್ಯಾರಿ ...

ಡಾ. ಶಾಹ್ ಉಸ್ತಾದ್.

Image
ಡಾ. ಶಾಹ್ ಉಸ್ತಾದ್. ✍️ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಡಾ. ಶಾಹ್ ಉಸ್ತಾದ್ ಎಲ್ಲರಿಗೂ ಚಿರಪರಿಚಿತ ನಾಮ. ಇಸ್ಲಾಮಿನ ವಿದ್ಯಾ ಪ್ರಪಂಚದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಿದ್ವಾಂಸರಿಗೆ ಅಪ್ರತಿಮ ಮಾದರಿ ವ್ಯಕ್ತಿಯಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯತೆಯನ್ನು ತೋರಿಸಿ, ಧಾರ್ಮಿಕ, ಸಾಹಿತ್ಯಿಕ, ಭಾಷಣ, ಬರಹ ರಂಗದಲ್ಲಿ ಮಿಂಚಿದ ಮೇರು ಪ್ರತಿಭೆಯಾಗಿದ್ದರು. 1935 ರಲ್ಲಿ ಡಾ.ಮಹ್ಮೂದ್ ಶಾಹ್ ಉಸ್ತಾದರ ಜನನ ಕುಂಬಳೆಯ ಕುಂಬೋಲಿನಲ್ಲಿ ಆಗಿತ್ತು. ತಂದೆಯ ಹೆಸರು ಹಾಜಿ ಅಬ್ದುಲ್ಲಾ ಮುಸ್ಲಿಯಾರ್. ತಾಯಿ ಆಸಿಯ ಬೀಬಿ. ಕುಂಬೋಲ್ ಪರಿಸರದ ಮಹಿಳೆಯರಿಗೆ ಇಸ್ಲಾಮಿಕ್ ತರಗತಿಗಳನ್ನು ನೀಡುತ್ತಿದ್ದ ತಾಯಿ ತನ್ನ ಆರನೇ ವಯಸ್ಸಿನಲ್ಲಿ ಮರಣ ಹೊಂದಿದರು. ತಾಯಿಯ ನಿಧನದ ಬಳಿಕ ತನ್ನ ಮಗನೊಂದಿಗೆ ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ಪುತ್ತೂರು ತಾಲೂಕಿನ ಆತೂರಿಗೆ ಬಂದರು. ಆತೂರಿನಲ್ಲಿ ಡಾ.ಶಾಹ್ ಉಸ್ತಾದರ ಬಾಲ್ಯದ ಪಯಣ ಪ್ರಾರಂಭವಾಯಿತು. ಪ್ರಾಥಮಿಕ ಲೌಕಿಕ  ವಿದ್ಯಾಭ್ಯಾಸ ಆತೂರು ಕೊಯ್ಲಾ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ತಿಗೊಳಿಸಿದರು. ಧಾರ್ಮಿಕ ಪ್ರಾಥಮಿಕ ವಿದ್ಯಾಭ್ಯಾಸ ತನ್ನ ತಂದೆಯಿಂದಲೇ ಕರಗತ ಮಾಡಿದರು. ನಂತರ ವೈ ಅಬ್ದುರ್ರಹ್ಮಾನ್ ಪಯ್ಯಕ್ಕಿ ಉಸ್ತಾದರ ಶಿಷ್ಯತ್ವವನ್ನು ಸ್ವೀಕರಿಸಿ ದರ್ಸಿಗೆ ಸೇರಿದರು. ಶಾಹ್ ಉಸ್ತಾದರ ಹದಿನಾರನೇ ವಯಸ್ಸಿನಲ್ಲಿ ತನ್ನ ತಂದೆ ಹಾಜಿ ಅಬ್ದುಲ್ಲಾಹ್ ಮುಸ್ಲಿಯಾರ್ ಮರಣ ಹೊಂದಿದರು. ನಿಧನದ ಮುಂ...