ಉಪ್ಪಿನಂಗಡಿ ಪೋಲೀಸ್ ಸ್ಟೇಷನ್ ತಾಯಿ-ತಂದೆಗಳಿಗೆ ಕೈ ಮುಗಿದು ನಮಸ್ಕರಿಸಿ ಮಾಡುತ್ತಿರುವ ವಿನಂತಿ ಏನಂದರೆ... --- ಶಿಸ್ತಿನಿಗೆ ಪರ್ಯಾಯ ಹೆಸರಾಗಿ ಖ್ಯಾತಿಯುಳ್ಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೇರ್ ಸ್ಟೈಲ್, ಅವರ ನಡೆ-ನಡಿಗೆ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ, ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಶಿಕ್ಷಕರು ನೋಡುತ್ತಾ, ಏನೂ ಮಾಡಲಾಗದೆ ನಿರಾಶರಾಗಿರುವ ಸ್ಥಿತಿಯಲ್ಲಿದ್ದಾರೆ. ತಾಯಿ-ತಂದೆಗಳಿಗೆ ಅವರ ಮಕ್ಕಳ ಮೇಲಿನ ಗಮನ, ನಿಯಂತ್ರಣ ಕಡಿಮೆಯಾಗಿದ್ದರೆ, ಅವರು ಇಂತಹವರಾಗಿ ಬೆಳೆದು ಬರುತ್ತಾರೆ. ಶಿಸ್ತು ಮಾತುಗಳಿಂದ ಬರದು, ಸ್ವಲ್ಪ ಶಿಕ್ಷೆ, ಭಯ-ಭಕ್ತಿಯಿಂದ ಮಾತ್ರ ಮೂಡಿಬರುತ್ತದೆ. ಮಕ್ಕಳಿಗೆ ಶಾಲೆಯಲ್ಲಿ ಭಯವಿಲ್ಲ. ಮನೆಗೆ ಹೋದರೂ ಭಯವಿಲ್ಲ. ಅದರಿಂದಲೇ ಸಮಾಜ ಇಂದು ಭಯಭೀತನಾಗುತ್ತಿದೆ. ಅವರೇ ಇಂದಿನ ರೌಡಿಗಳಾಗಿ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅವರ ನಡವಳಿಕೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ನಂತರ ಪೋಲೀಸರ ಕೈಗೆ ಸಿಕ್ಕಿ, ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. "ಗುರುವನ್ನು ಗೌರವಿಸದ ಸಮಾಜ ನಾಶವಾಗುವುದು." ಇದು ನಿಜ. ಗುರುವಿಗೆ ಭಯವಿಲ್ಲ, ಗೌರವವಿಲ್ಲ, ಅಷ್ಟು ಮಾತ್ರವಲ್ಲದೆ, ಓದು, ಸಂಸ್ಕಾರ ಹೇಗೆ ಬರುತ್ತವೆ? "ಕೊಡಬೇಡಿ! ಬೈಬೇಡಿ! ಬಡಿಗೆ ಬರದವನನ್ನು ಯಾಕೆ ಬರುವುದಿಲ್ಲ ಎಂದು ಕೇಳಬೇಡಿ! ಓದಲು ಒತ್ತಾಯಿಸಿದರೂ, ಕೆಲಸ ಕೊಡಿಸಿದರೂ ಶಿಕ್ಷಕರೇ ತಪ್ಪು!...
https://www.facebook.com/share/p/19ukkv3eQb/ *ಯುಟಿಕೆ ಬೆಂಬಲಿಸಿ ಬೆಳೆಸಿದ ನಾವೇ ಹತಾಶರಾಗಿದ್ದೇವೆ* ✍️ರಾಫಿ ನಗರ ಯುಟಿ ಖಾದರ್ ವಿರುದ್ಧ ಎಸ್ಡಿಪಿಐ ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಿದ್ದ ಕಾಲದಲ್ಲಿ ಅವರ ಪರವಾಗಿ ನಮ್ಮ ಕೈಗಳು ಸಾಕಷ್ಟು ಚಲಿಸಿದ್ದವು. ಸರಿ ತಪ್ಪುಗಳು ವಿಮರ್ಶೆಗಳಾಚೆ ನಮ್ಮ ಸಮುದಾಯದ ಪ್ರತಿನಿಧಿಯಾಗಿ ಕಂಡು ಕೊಂಡಾಡಿದ್ದೆವು. ಇಡೀ ಸಮಾಜದ ನಿಲುವುಗಳಾಚೆ ಅವರು ನಮ್ಮವರೆಂಬ ಕಲ್ಪನೆ ನಮ್ಮದಾಗಿತ್ತು. ಒಂದು ಕಡೆ ತಾಜುಲ್ ಉಲಮಾ ,ಸುಲ್ತಾನುಲ್ ಉಲಮಾ ಸಹಿತ ಎಲ್ಲಾ ಉಲಮಾಗಳ ಅನುಗ್ರಹವನ್ನೂ ಪಡೆದು ರಾಜಕೀಯದಲ್ಲಿ ಹಂತಹಂತವಾಗಿ ಮೇಲಕ್ಕೆ ಬೆಳೆದರು. ಯುಟಿ ಕೆ ರಾಜಕೀಯದಲ್ಲಿ ಸುಮಾರು 12ವರ್ಷಗಳ ಮೊದಲಿನ ವರೆಗೆ ,ಅಂದರೆ ತಾಜುಲ್ ಉಲಮಾ ವಫಾತ್ ತನಕ ಅವರೊಳಗಿನ ಸಮಾಜದ ,ಸಮುದಾಯ ಬದ್ಧತೆ ನಮಗೆ ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಕಾಣುತ್ತಿತ್ತು. ಒಬ್ಬ ಮುಸ್ಲಿಮನಾಗಿ ಇತರ ಧರ್ಮೀಯರ ಪೂಜೆಗಳಲ್ಲಿ , ಅಥವಾ ಆಚರಣೆಗಳಲ್ಲಿ ಭಾಗಿಯಾಗುವುದು ನಾವು ನಮ್ಮ ಧರ್ಮಕ್ಕೆ ಬಗೆಯುವ ದ್ರೋಹವಾಗಿಯೂ , ನಂಬಿಕೆ ಇಲ್ಲದೆ ಇತರ ಧರ್ಮೀಯರ ನಂಬಿಕೆಗೆ ಮಾಡುವ ಅಪಚಾರವೂ ಆಗಿದೆ. ಇಂತಹ ವಿಚಿತ್ರ ರಾಜಕೀಯ ಗಿಮಿಕ್ಗಳು ತಾಜುಲ್ ಉಲಮಾರ ವಫಾತ್ ತನಕ ನಾವು ಯುಟಿಕೆಯಲ್ಲಿ ಕಂಡಿರಲಿಲ್ಲ. ಆದರೆ ಅದ್ಯಾವ ಭಯ ಅವರಿಂದ ಹೊರಟು ಹೋಯ್ತೋ , ಅಥವಾ ತಂಙಳರ ಜೀವಿತ ಕಾಲದಲ್ಲಿದ್ದ ಭಯ ಅದು ಬೌದ್ಧಿಕವಾದ ಅವರ ಮೇಲಿನ ಭಯ ಮಾತ್ರ ಇದ್ದುದರಿಂದ ಅವರನ್ನು ಪ್ರಾಮ...
Comments
Post a Comment