ಉಳ್ಳಾಲದ ಉಲಮಾಗಳಿಂದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಭೇಟಿ
*ಉಳ್ಳಾಲದ ಉಲಮಾಗಳಿಂದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಭೇಟಿ*
ಉಳ್ಳಾಲ ದರ್ಗಾದ ಪದಚ್ಯುತ ಸಮಿತಿಯಿಂದ ಅನಧಿಕ್ರತವಾಗಿ ಶರೀಅತ್ ನಿಯಮಕ್ಕೆ ವಿರುದ್ಧವಾಗಿ ಹೊಸ ಖಾಝಿಯ ನೇಮಕದ ಕುರಿತು ಇರುವ ಪತ್ರಿಕಾ ವರದಿಯನ್ನು ಆಧರಿಸಿ ಉಳ್ಳಾಲದ ಉಲಮಾ ನೇತಾರರು ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು.
ತಾಜುಲ್ ಉಲಮಾ ಖ.ಸಿ ರವರ ಹಯಾತ್ ಕಾಲದಲ್ಲಿಯೇ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ರವರನ್ನು ಉಳ್ಳಾಲದ ಸರ್ವ ಮೊಹಲ್ಲಾಗಳಿಗೆ ನಾಯಿಬ್ ಖಾಝಿಯಾಗಿಯೂ, ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸಯ್ಯಿದ್ ಕೂರತ್ ತಂಗಲ್ ರವರನ್ನು ಖಾಝಿ ಮಾಡಬೇಕೆಂಬ ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ನಿರ್ದೇಶದಂತೆ ಸರ್ವ ಮೊಹಲ್ಲಾಗಳ ಸಮಿತಿ ನಾಯಕರು, ಸದಸ್ಯರು ಹಾಗು ಮೊಹಲ್ಲಾ ನಾಗರಿಕರ ಅಂಗೀಕಾರದೊಂದಿಗೆ ಕೂರತ್ ತಂಗಲ್ ಉಳ್ಳಾಲಕ್ಕೆ ಖಾಝಿಯಾಗಿ ನೇಮಕಗೊಂಡರು. ಅಂತೆಯೇ ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸಯ್ಯಿದ್ ಕೂರತ್ ತಂಗಲ್ ಉಳ್ಳಾಲದ ವಿವಿಧ ಮೊಹಲ್ಲಾಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ನೇತ್ರತ್ವ ನೀಡುತ್ತಿದ್ದಾರೆ. ಆದರೆ ಪದಚ್ಯುತಗೊಂಡ ಉಳ್ಳಾಲ ದರ್ಗಾದ ಸ್ವಘೋಷಿತ ಆಡಳಿತ ಸಮಿತಿಯು ಕೇವಲ ಗೊಂದಲ ಉಂಟು ಮಾಡುವ ಉದ್ಧೇಶದಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಗಾಳಿಗೆ ತೂರಿ ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ರವರ ಸಲಹೆ ಪಡೆದು ಹೊಸ ಖಾಝಿಯ ನೇಮಕ ಮಾಡಲಿದ್ದೇವೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದು, ಈ ಬಗ್ಗೆ ತಮಗೆ ಮಾಹಿತಿ ನೀಡುವ ಸಲುವಾಗಿ ಉಳ್ಳಾಲದ ಉಲಮಾ ಒಕ್ಕೂಟದ ನಾಯಕರು ತಮ್ಮ ಬಳಿ ಬಂದಿದ್ದೇವೆ ಅಂತ ತಿಳಿಸಿದಾಗ ಈ ರೀತಿ ನನ್ನ ಹೆಸರನ್ನು ಬಳಸಿ ಕೆಲವರು ಕಳಂಕ ತರುತ್ತಿದ್ದಾರೆ. ಅವರು ಒಂದು ವೇಳೆ ನನ್ನ ಸಲಹೆ ಪಡೆಯಲು ಆಗಮಿಸಿದರೆ ಅವರಿಗೆ ತಕ್ಕ ಉತ್ತರವನ್ನು ನೀಡಲಿದ್ದೇನೆ ಎಂದು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಖಡಕ್ ಎಚ್ಚರಿಕೆಯನ್ನು ನೀಡಿದರು. ಬಳಿಕ ಉಳ್ಳಾಲದ ಉಲಮಾ ಒಕ್ಕೂಟದ ನಾಯಕರು ಉಳ್ಳಾಲ ನಾಗರಿಕರಿಗೆ ಭೇಟಿಯ ಉದ್ಧೇಶವನ್ನು ತಿಳಿಸುವ ಸಲುವಾಗಿ ಮಾಹಿತಿ ಪತ್ರವನ್ನು ಸಯ್ಯಿದ್ ಪಾಣಕ್ಕಾಡ್ ತಂಗಲ್ ರವರಿಗೆ ಹಸ್ತಾಂತರಿಸಿ ಸಯ್ಯಿದರ ಅನುಮತಿ ಮೇರೆಗೆ ಫೋಟೋ ಕ್ಲಿಕ್ಕಿಸಿದರು.
ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ರವರನ್ನು ಜಾಮಿಅತು ದಾರುಲ್ ಹುದಾ ಅಲ್ ಇಸ್ಲಾಮಿಯ್ಯಃ ಸ್ಥಾಪನೆಯಲ್ಲಿ ಭೇಟಿ ಮಾಡಿ ಹೊಸ ಖಾಝಿ ನೇಮಕ ವಿವಾದದ ಕುರಿತು ಉಳ್ಳಾಲದ ಉಲಮಾ ನಾಯಕರು ಚರ್ಚೆ ನಡೆಸಿದರು. ಖಾಝಿ ಇರುವುದರೊಂದಿಗೆ ಮತ್ತೊಂದು ಖಾಝಿಯನ್ನು ನೇಮಕ ಮಾಡುವುದು ಅದು ಇಸ್ಲಾಂ ಶರೀಅತ್ತಿಗೆ ವಿರುದ್ಧವಾಗಿದೆ ಎಂದು ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹೇಳಿದರು.

Comments
Post a Comment